ಮಾಹಾತ್ಮ್ಯಗಳು

ಕ್ಷೇತ್ರ ಸಂದರ್ಶನ, ಪವಿತ್ರ ನದೀಸ್ನಾನ, ಪುಣ್ಯಶ್ಲೋಕದ ಜೀವನಾಧ್ಯಯನ ಮುಂತಾದವುಗಳ ಮೌಲ್ಯಗಳು ಶ್ರುತಪಡಿಸುವ ಕೃತಿಗಳು. ಪಾಪಕಲುಷಿತ ಜನರು ಪಾಪ ಮುಕ್ತರಾಗಲು ವ್ರತಾಚರಣೆ. ತೀರ್ಥಸ್ನಾನ, ಕ್ಷೇತ್ರ ಸಂದರ್ಶನ ದೇವತಾ ಪ್ರಜೆ ಇವನ್ನು ಮಾಡಬೇಕು ಎಂಬ ಧರ್ಮ ಸೂಕ್ಷ್ಮವಿದೆ. ಈ ಕಾರ್ಯಗಳಲ್ಲಿ ಪ್ರವೃತ್ತಿ ಉಂಟಾಗಲು ಇವುಗಳ ಶ್ರೇಷ್ಠತೆಯನ್ನೂ ಗುಣಕೀರ್ತನದ ಹೇಳುವ ಕೃತಿಗಳು. ಸಾಮಾನ್ಯವಾಗಿ ಇವು ಅಧಿಕವಾಗಿ ಕಂಡುಬರುವುದು ಸಂಸ್ಕøತ ಪುರಾಣಗ್ರಂಥಗಳಲ್ಲಿ, ಕ್ಷೇತ್ರತೀರ್ಥಮಾಸವ್ರತ ಇವೇ ಮೊದಲಾದವುಗಳಿಗೆ ಸಂಬಂಧ ಪಟ್ಟ ಮಾಹಾತ್ಮ್ಯ ಕೃತಿಗಳು ಅನೇಕವಿದೆ.

	ಶಿವ-ಪಾರ್ವತಿ, ಶಂಕರ-ನಾರದ, ನಾರದ-ಭೃಗು, ಪೃಥು-ನಾರದ, ಸೂತ-ಋಷಿಗಳು ಮೊದಲಾದವರ ಸಂವಾದ ರೂಪವಾಗಿ ಈ ಮಹಾತ್ಮ್ಯ ಕೃತಿಗಳು ಕಂಡುಬರುತ್ತವೆ. ಇವನ್ನೇ ಆಯಾಕೃತಿಗಳಲ್ಲಿ ವಿವರಿಸಿರುವ ನಿರ್ದಿಷ್ಟ ವಿಷಯಗಳಿಗೆ ತಕ್ಕಂತೆ ಕ್ಷೇತ್ರತೀರ್ಥ ಮಾಸ ವ್ರತ ಮೊದಲಾದ ಹೆಸರುಗಳಿಂದ ಕರೆಯಲಾಗಿದೆ. ಪ್ರತಿಯೊಂದು ಮಹಾತ್ಮ್ಯದಲ್ಲೂ ಅದಕ್ಕೆ ಸಂಬಂಧಪಟ್ಟ ಕಥೆ ಇರುತ್ತದೆ. ಮಹಾತ್ಮ್ಯ ಶ್ರವಣದಿಂದ ಪಾಪನಿವಾರಣೆಯಾಗಿ ಮುಕ್ತಿ ದೊರೆಯುತ್ತದೆಂದು ಕೃತಿಯ ಕೊನೆಯಲ್ಲಿ ಫಲಶ್ರುತಿ ಇರುತ್ತದೆ.

	ಕನ್ನಡ ಸಾಹಿತ್ಯದಲ್ಲೂ ಮಹಾತ್ಮ್ಯಕೃತಿಗಳು ಹಲವಾರು ಇವೆ. ಇವುಗಳಲ್ಲಿ ಕೆಲವು ಛಂದೋಬದ್ಧವಾಗಿಯೂ ಕೆಲವು ಚಂಪೂರೂಪವಾಗಿಯೂ ಮತ್ತೆ ಕೆಲವು ಗದ್ಯಗಳಲ್ಲಿಯೂ ಇವೆ. 16ನೆಯ ಶತಮಾನದ ತನಕ ಸ್ವತಂತ್ರವಾಗಿ ಯಾವ ಮಹಾತ್ಮ್ಯ ಗ್ರಂಥವೂ ಇದ್ದಂತೆ ಕಾಣಬರುವುದಿಲ್ಲ. ಕೆಲವು ಕೃತಿಗಳ ಮಧ್ಯದಲ್ಲಿ ಮಂತ್ರ ಮಹಾತ್ಮ್ಯ. ಪ್ರಸಾದ ಮಹಾತ್ಮ್ಯ, ವಿಭೂತಿ ಮಹಾತ್ಮ್ಯ ಎಂಬ ಹೆಸರಿನಲ್ಲಿ ಅಲ್ಪ ಪ್ರಮಾಣದ ಗ್ರಂಥ ಭಾಗಗಳು ಮಾತ್ರ ಇದಕ್ಕೂ ಮೊದಲು ಇದ್ದಂತೆ ತಿಳಿದು ಬರುತ್ತದೆ. ಮೈಸೂರರಸದ ಪೀಳಿಗೆಯಲ್ಲಿ ಈ ಮಹಾತ್ಮ್ಯ ಗ್ರಂಥಗಳು ಹೆಚ್ಚಾಗಿ ರಚಿತವಾಗಿವೆ. ಅದರಲ್ಲೂ ಚಿಕ್ಕದೇವರಾಯ ಮತ್ತು ಮುಮ್ಮಡಿಕೃಷ್ಣರಾಜ ಇವರ ಕಾಲದಲ್ಲಿ ರಚಿತವಾಗಿರುವ ಮೇಲುಕೋಟೆ, ಕಂಚಿ, ಶ್ರೀರಂಗ ಕ್ಷೇತ್ರಗಳ ಮತ್ತು ಕಾವೇರಿ ನದಿಯ ಮಹಾತ್ಮ್ಯಯ ಕೃತಿಗಳೇ ಅಧಿಕ. ಕೆಲವರು ಸಂಸ್ಕøತದಲ್ಲಿರುವ ಮಹಾತ್ಮ್ಯ ಗ್ರಂಥಗಳಿಗೆ ಕನ್ನಡದಲ್ಲಿ ಟೀಕನ್ನು ರಚಿಸಿರುತ್ತಾರೆ. ಮತ್ತೆ ಕೆಲವರು ಅವನ್ನೇ ಆದರಿಸಿ ಸ್ವತಂತ್ರವಾದ ಕೃತಿಗಳನ್ನೇ ರಚಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ಕೆಲವು ಮುಖ್ಯ ಮಹಾತ್ಮ್ಯ ಗ್ರಂಥಗಳು ಕವಿ ಕಾಲ ಗ್ರಂಥ ವಿಷಯ ಇವುಗಳ ಪಟ್ಟಿ ಇಲ್ಲಿದೆ.
ಗ್ರಂಥದ ಹೆಸರು
ಕವಿ
ಕಾಲ
ವಿಶೇಷ

ಬಳ್ಳಿಗಾವಿ ಮಾಹಾತ್ಮ್ಯ
ಬಸವಲಿಂಗ
ಸು 1611
ವಾರ್ಧಕ ಷಟ್ಟದಿ, ಶಿವಾಧಿಕ್ಯ ವಿಚಚಾರ

ನಂದಿಮಾಹಾತ್ಮ್ಯ
ಗೋವಿಂದ
ಸು 1650
(ವಾ. ಷ.) ನಂದಿಯ ಮಹಿಮೆ

ತುಲಸೀ ಮಾಹಾತ್ಮ್ಯ
ಅಚ್ಯುತದಾಸ
ಸು 1650
(ಭಾ. ಷ.) ತುಲಸಿಯ ಮಹಿಮೆ

ಕಾವೇರಿ ಮಾಹಾತ್ಮ್ಯ
ರಂಗಯ್ಯ
ಸು 1730
(ಭಾ. ಷ.)ಕಾವೇರಿ ನದಿ ಮಹಿಮೆ

ಸೇತೂ ಮಾಹಾತ್ಮ್ಯ
ವೈದ್ಯೇಶ್ವರ ಭಕ್ತ
ಸು 1715
(ಭಾ. ಷ.)ಸೇತೂ ಮಹಿಮೆ

ಬ್ರಹ್ಮೋತ್ತರ ಖಂಡ
ಮಹಾದೇವ
ಸು 1725
(ಭಾ. ಷ.)ಷಡಕ್ಷರ, ವಿಭೂತಿ, ರುದ್ರಾಕ್ಷಿ, ಪುರಾಣ ಶ್ರವಣ ಮೊದಲಾದ ಮಹಿಮೆಗಳು

ದೇವೀಮಾಹಾತ್ಮ್ಯ
ಚಿದಾನಂದವಧೂತ
ಸು. 1750
(ಭಾ. ಷ.) ದೇವೀ ಮಹಿಮೆ

ಸಹ್ಯಾದ್ರಿ ಮಹಿಮೆ
ಬಾಲಭಾಸ್ಕರ
  ?
(ಭಾ. ಷ.) ಸಹ್ಯಾದ್ರಿ ಮಹಿಮೆ

ಯಾದವಗಿರಿಮಾಹಾತ್ಮ್ಯ
ಪ್ರತಿವಾದಿ ಭಯಂಕರಂ
  ?

ವೆಂಕಟಾಚಾರ್ಯ ಶಿಷ್ಯ

(ಭಾ. ಷ.) ಮೇಲು ಕೋಟೆ ಮಹಿಮೆ

ಕಾವೇರೀ ಮಾಹಾತ್ಮ್ಯ
ಲಿಂಗಕವಿ
ಸು 1850
(ಭಾ. ಷ.) ಕಾವೇರೀ ನದಿ ಮಹಿಮೆ (ಸಾಂಗತ್ಯ)

ಪಶ್ಚಿಮರಂಗಮಾಹಾತ್ಮ್ಯ
ಚಿಕ್ಕುಪಾಧ್ಯಾಯ
ಸು 1672
(ಭಾ. ಷ.) ಶ್ರೀರಂಗಪಟ್ಟಣದ ಮಹಿಮೆ (ಸಾಂಗತ್ಯ)

ಯಾದವಗಿರಿ ಮಾಹಾತ್ಮ್ಯ
ಚಿಕ್ಕುಪಾಧ್ಯಾಯ
ಸು 1672
ಮೇಲುಕೋಟೆ ಮಹಿಮೆ (ಸಾಂಗತ್ಯ)

ಚಂಪೂ ಗ್ರಂಥಗಳು

ಕಮಲಾಚಲಮಾಹಾತ್ಮ್ಯ
ಚಿಕ್ಕುಪಾಧ್ಯಾಯ
1672
ಹಿಮವದ್ಗೋಪಾಲಸ್ವಾಮಿ ಬೆಟ್ಟದಮಹಿಮೆ

ಹಸ್ತಿಗಿರಿ ಮಾಹಾತ್ಮ್ಯ
ಚಿಕ್ಕುಪಾಧ್ಯಾಯ
1672
ಕಂಚಿ ಕ್ಷೇತ್ರದ ಮಹಿಮೆ

ಯಾದವಗಿರಿ ಮಾಹಾತ್ಮ್ಯ
 ತಿಮ್ಮ
1677
ಮೇಲುಕೋಟೆ ಮಹಿಮೆ

ಪಶ್ಚಿಮರಂಗ ಮಾಹಾತ್ಮ್ಯ
ತಿಮ್ಮ
1677
ಶ್ರೀರಂಗಪಟ್ಟಣದ ಮಹಿಮೆ

ವೆಂಕಟಗಿರಿಮಾಹಾತ್ಮ್ಯ
ತಿಮ್ಮ
1677
ತಿರುಪತಿ ಕ್ಷೇತ್ರದ ಮಹಿಮೆ

ಹಾಲಾಸ್ಯ ಮಾಹಾತ್ಮ್ಯ
ಮಲ್ಲಿಕಾರ್ಜುನ
1678
ಶ್ರೀರಂಗ ಕ್ಷೇತ್ರ ಮಹಿಮೆ

ಶ್ರೀ ರಂಗ ಮಾಹಾತ್ಮ್ಯ
ವೆಂಕಟೇಶ
1740
ಶಿವ ಮಹಿಮೆ

ಸಿಂಗರಾರ್ಯ (ಬೆಟ್ಟದ ಚಾಮರಾಜನ ಉಪಾಧ್ಯಾಯ
1740
ಶ್ರೀರಂಗ ಕ್ಷೇತ್ರದ ಮಹಿಮೆ

ಗದ್ಯ ಗ್ರಂಥಗಳು

ಶ್ರೀರಂಗ ಮಾಹಾತ್ಮ್ಯ
ರಂಗಾಚಾರ್ಯ
ಸು 1570
ಶ್ರೀರಂಗ ಕ್ಷೇತ್ರದ ಮಹಿಮೆ

ಯದುಗಿರಿ ಮಾಹಾತ್ಮ್ಯ
ಚಿಕ್ಕುಪಾಧ್ಯಾಯ
1672
ಮೇಲುಕೋಟೆ ಮಹಿಮೆ

ವೆಂಕಟಗಿರಿಮಾಹಾತ್ಮ್ಯ
ಚಿಕ್ಕುಪಾಧ್ಯಾಯ
1672
ತಿರುಪತಿ ಕ್ಷೇತ್ರದ ಮಹಿಮೆ

ಶ್ರೀ ರಂಗ ಮಾಹಾತ್ಮ್ಯ
ಚಿಕ್ಕುಪಾಧ್ಯಾಯ
1672
ಶ್ರೀರಂಗ ಕ್ಷೇತ್ರದ ಮಹಿಮೆ

ಹಾಲಾಸ್ಯ ಮಾಹಾತ್ಮ್ಯ
ಕಳೆಲೆ ನಂಜರಾಜ
1740
ಶಿವ ಮಹಿಮೆ

ಹರದತ್ತಾಚಾರ್ಯ ಮಹಾತ್ಮ್ಯ
ಕಳೆಲೆ ನಂಜರಾಜ
1740
ಭದ್ರಗಿರಿ ಕ್ಷೇತ್ರದ ಮಹಿಮೆ

ಭದ್ರಗಿರಿ ಮಾಹಾತ್ಮ್ಯ
ಕಳೆಲೆ ನಂಜರಾಜ
1740
ಹರದತ್ತಾಚಾರ್ಯ ಮಹಿಮೆ

ಕಕೂದ್ಗಿರಿ ಮಾಹಾತ್ಮ್ಯ
ಕಳೆಲೆ ನಂಜರಾಜ
1740
ಶಿವಗಂಗೆ ಮಹಿಮೆ

ಗರಳಪುರಿ ಮಾಹಾತ್ಮ್ಯ
ಕಳೆಲೆ ನಂಜರಾಜ
1740
ನಂಜನಗೂಡು ಮಹಿಮೆ

ಸೇತು ಮಾಹಿಮಾದರ್ಶ
ಕಳೆಲೆ ನಂಜರಾಜ
1740
ಸೇತು ಮಹಿಮೆ

ಕಮಲಾಚಲ ಮಾಹಾತ್ಮ್ಯ
ಗೋಪಾಲರಾಜ
1740
ಹಿಮವದ್ಗೋಪಾಲ ಬೆಟ್ಟದ ಮಹಿಮೆ

ಅಖಂಡಕಾವೇರಿ ಮಾಹಾತ್ಮ್ಯ
ಮುಮ್ಮಡಿ ಕೃಷ್ಣರಾಜ
1794-1868
ಕಾವೇರಿ ನದಿಯ ಮಹಿಮೆ

ಚುಂಚನಕಟೆ ಮಾಹಾತ್ಮ್ಯ
ಮುಮ್ಮಡಿ ಕೃಷ್ಣರಾಜ
1794-1868
ಚುಂಚನಕಟ್ಟೆ ಮಹಿಮೆ

ತಲಕಾವೇರಿ ಮಾಹಾತ್ಮ್ಯ
ಮುಮ್ಮಡಿ ಕೃಷ್ಣರಾಜ
1794-1868
ತುಲಾ ಮಾಸದ ಕಾವೇರಿಯ ಮಹಿಮೆ

ದÉೀವೀ ಮಾಹಾತ್ಮ್ಯ
ಮುಮ್ಮಡಿ ಕೃಷ್ಣರಾಜ
1794-1868
ದೇವಿಯ ಮಹಿಮೆ

ಹಾಲಾಸ್ಯ ಮಾಹಾತ್ಮ್ಯ
ಮುಮ್ಮಡಿ ಕೃಷ್ಣರಾಜ
1794-1868
ಶಿವ ಮಹಿಮೆ

ಧನುರ್ಮಾಸ ಮಾಹಾತ್ಮ್ಯ
ವೆಂಕಟರಾಮಾ ಶಾಸ್ತ್ರಿ
1823
ಧನುರ್ಮಾಸದ ಮಹಿಮೆ

ತಲಕಾವೇರಿ ಮಾಹಾತ್ಮ್ಯ
ಚೆಲುವಾಂಬೆ
1725
ತುಲಾ ಮಾಸದ ಕಾವೇರಿ ನದಿಯ ಮಹಿಮೆ

ಪದಗಳು

ವೆಂಕಾಟಾಟಲ ಮಾಹಾತ್ಮ್ಯ ಲಾಲಿಪದ
ಚೆಲುವಾಂಬೆ
1725
ತಿರುಪತಿ ಕ್ಷೇತ್ರ ಮಹಿಮೆ

	ಇವಲ್ಲದೆ ದೇವೀ ಮಹಾತ್ಮ್ಯ, ಕಲ್ಯಾಣ ಪಟ್ಟಣದ ಮಹಾತ್ಮ್ಯ, ತಾರ್ಕಿಕ ಮಹಾತ್ಮ್ಯ, ಗೋವರ್ಧನಗಿರಿ ಮಹಾತ್ಮ್ಯ, ಜಂಗಮ ಮಹಾತ್ಮ್ಯ, ವಿಭೂತಿ ಮಹಾತ್ಮ್ಯ, ವ್ಯಾಘ್ರಾಚಲ ಮಹಾತ್ಮ್ಯ, ಸಾಲಗ್ರಾಮ ಮಹಾತ್ಮ್ಯ, ಕೊಲ್ಲಿಪಾತ ಮಹಾತ್ಮ್ಯ, ಕೈಶಿಕದ್ವಾದಶೀ ಮಹಾತ್ಮ್ಯ, ಕಾಶೀ ಮಹಾತ್ಮ್ಯ, ಇವೇ ಮೊದಲಾದ ಇನ್ನೂ ಅನೇಕ ಮಹಾತ್ಮ್ಯಗಳನ್ನು ತಿಳಿಸುವ ಕೃತಿಗಳಿವೆ.			
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ